ಶ್ರೀಮಠದ ಪರಿಚಯ

ಜಗದ್ಗುರು ಶ್ರೀ ಯಚ್ಚರಸ್ವಾಮಿಮಠ ( ಗವಿಮಠ ) ಶಿರೋಳ ಎಂದು ಕೂಡ ಇದನ್ನು ಕರೆಯುತ್ತಾರೆ ಶ್ರೀಮಠದ ಮೂಲ ಕರ್ತೃ ಪುರುಷರು .ಜಗದ್ಗುರು ಶ್ರೀ ಯಚ್ಚರಸ್ವಾಮಿಗಳು. 17 ನೇ ಶತಮಾನದಲ್ಲಿ ಶಿವನ ಪುನರ್ ಅವತಾರಿಗಳು ಹಾಗೂ ಪವಾಡ ಪುರುಷರಾಗಿ ಭೂಮಿಗೆ ಬಂದವರು .ಶ್ರೀಮಠಕ್ಕೆ ಸುಮಾರು 300 ವರ್ಷಗಳ ಬಹುದೊಡ್ಡ ಇತಿಹಾಸವಿದ್ದು ಭವ್ಯ ಪರಂಪರೆಯನ್ನು ಹೊಂದಿದ್ದು ಅಸಂಖ್ಯಾತ ಭಕ್ತರನ್ನು ಹೊಂದಿದೆ. ಮಹಿಮಾ ಪುರುಷರಾದ ಜಗದ್ಗುರು ಯಚ್ಚರಸ್ವಾಮಿಗಳು, ಬೇಡಿಬಂದ ಭಕ್ತರ ಕಷ್ಟಗಳನ್ನು ಭವರೋಗವನ್ನು ನಿವಾರಿಸಿ ಅಭಯಹಸ್ತವನ್ನಿಟ್ಟು ಉದ್ಧರಿಸಿ ನಾಡಿನುದ್ದಕ್ಕೂ ಸಂಚರಿಸುತ್ತಾ ಸುಮಾರು 35 ಕ್ಕೂ ಹೆಚ್ಚು ಮಠಗಳನ್ನ ಸ್ಥಾಪಿಸಿದ್ದಾರೆ .ನರಗುಂದ ಸಂಸ್ಥಾನದ ರಾಜ ಶ್ರೀ ಬಾಬಾಸಾಹೇಬನಿಗೆ ಅಕ್ಷಯ ಪಾತ್ರೆಯನ್ನು ನೀಡಿ ಅವನಿಂದಲೇ ಆತನ ಪ್ರಾಂತ್ಯವಾದ ಶಿರೋಳ ಗ್ರಾಮದಲ್ಲಿ ಗವಿಮಠವನ್ನು ನಿರ್ಮಿಸಿಕೊಂಡರು. ನಂತರ ಮಹಾನವಮಿಯಂದು ವಿಜೃಂಭಣೆಯಿಂದ ಜಾತ್ರೆಯನ್ನು ನೆರವೇರಿಸಲು ಆಜ್ಞಾಪಿಸಿದರು.ಶಿರೋಳ ಗ್ರಾಮದಲ್ಲೇ ಹಲವಾರು ವರ್ಷಗಳ ಕಾಲ ಇದ್ದು ಅನುಷ್ಠಾನ ಗೈದು ಗ್ರಾಮವನ್ನು ಪಾವನಗೊಳಿಸಿದರು. ಮುಂದೆ ಸಂಚರಿಸುತ್ತಾ ಹೊಳೆ ಆಲೂರಿಗೆ ಬಂದು ಭಕ್ತರಿಗೆ "ನಾನು ಮತ್ತೆ ಹುಟ್ಟಿ ಬರುತ್ತೆನೆ" ಎಂದು ಅಭಯವನ್ನಿತ್ತು 1836 ರಲ್ಲಿ ಸಜೀವ ಸಮಾಧಿಯನ್ನು ಹೊಂದುವ ಮೂಲಕ ಇಂದಿಗೂ ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನ ನಿವಾರಿಸುತ್ತ ಗವಿಯಲ್ಲಿ ಜೀವಂತವಾಗಿದ್ದಾರೆ. ಅಂದಿನಿಂದ ಇಂದಿಗೂ ಅವರು ಉಪಯೋಗೋಸಿದ ಯೋಗ ದಂಡ, ಕಮಂಡಲ, ಚಪಗೊಡಲಿ, ಹಾಗೂ ಅವರು ಆಡಿದ ಕಟ್ಟಿಗೆಯ ಬಸವಣ್ಣನ ಮೂರ್ತಿ ಇಂದಿಗೂ ನಿತ್ಯ ಪೂಜೆ ಗೊಳ್ಳುತ್ತಿವೆ, ವಿಶೇಷವೆಂಬತೆ ಯಚ್ಚರಸ್ವಾಮಿಗಳು ಆಡಿದ ಕಟ್ಟಿಗೆ ಬಸವಣ್ಣನ ಮೂರ್ತಿಯ ಕೊಂಬುಗಳು ಬೆಳೆಯುತ್ತಲಿವೆ. ಇಂದಿಗೂ ಜಗದ್ಗುರು ಶ್ರೀ ಯಚ್ಚರಸ್ವಾಮಿಗಳ ಲೀಲೆಯನ್ನ ನಾವೆಲ್ಲ ನೋಡಬಹುದು. .ಹೀಗೆ ಶ್ರೀಮಠವು ಅಂದಿನಿಂದ ಇಂದಿನವರೆಗೆ ಧಾರ್ಮಿಕ, ಸಾಮಾಜಿಕ, ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ಈಗ ಶೈಕ್ಷಣಿಕ ಕ್ಷೇತ್ರದಲ್ಲೂ ಹೆಜ್ಜೆ ಇಡಲು ಸನ್ನದ್ಧವಾಗಿದೆ.

ಪರಮಪೂಜ್ಯ ಶ್ರೀ ಅಭಿನವ ಮಹಾಸ್ವಾಮಿಗಳು

ಜೀವನದಲ್ಲಿ ಎಂದಿಗೂ ವ್ಯರ್ಥವಾಗುವಂತೆ ಬದುಕಬೇಡಾ, ಬದಲಿಗೆ ಈ ಜಗತ್ತಿಗೆ ಅರ್ಥವಾಗುವಂತೆ ಬದುಕು.

ಪರಮಪೂಜ್ಯ ಶ್ರೀ ಅಭಿನವ ಮಹಾಸ್ವಾಮಿಗಳು

ಜಗದ್ಗುರು ಯಚ್ಚರಸ್ವಾಮಿ ಗವಿಮಠದ ಪೀಠಾಧಿಪತಿಗಳು